ನಮ್ಮ ಉಡುಪಿ-ಚಿಕ್ಕಮಗಳೂರು
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಕರ್ನಾಟಕದ ೨೮ ಲೋಕಸಭಾ (ಸಂಸತ್ತಿನ ಕೆಳಮನೆ) ಕ್ಷೇತ್ರಗಲ್ಲಿ ಒಂದು. 2002 ರಲ್ಲಿ ಡೆಲಿಮಿಟೇಷನ್ ಕಮಿಷನ್ ಆಫ್ ಇಂಡಿಯಾ ಶಿಫಾರಸಿನ ಆಧಾರವಾಗಿ, 2008 ರಲ್ಲಿ ಸಂಸಧೀಯ ಕ್ಷೇತ್ರದ ವಿಂಗಡಣೆಯ ಅನುಷ್ಠಾನದ ಭಾಗವಾಗಿ ಈ ಕ್ಷೇತ್ರವನ್ನು ರಚಿಸಲಾಯಿತು.
ಕ್ಷೇತ್ರ ವಿಭಾಗಗಳು
2014 ರ ಪ್ರಕಾರ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಎಂಟು ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿದೆ:
- ಚಿಕ್ಕಮಗಳೂರು
- ಕಾಪು
- ಕಾರ್ಕಳ
- ಕುಂದಾಪುರ
- ಮೂಡಿಗೆರೆ ( ಪ.ಜಾ)
- ಶೃಂಗೇರಿ
- ತರಿಕೆರೆ
- ಉಡುಪಿ
ನಾಲ್ಕು ವಿಧಾನಾಸಭಾ ಕ್ಷೇತ್ರಗಳು: ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಮತ್ತು ತರೀಕೆರೆ – ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.ಇನ್ನುಳಿದ ನಾಲ್ಕು : ಕುಂದಾಪುರ ,ಉಡುಪಿ, ಕಾಪು ಮತ್ತು ಕಾರ್ಕಳ – ಉಡುಪಿ ಜಿಲ್ಲೆಯಲ್ಲಿದೆ.
