WhatsApp Image 2024-03-04 at 5.31.26 PM
PlayPause
previous arrowprevious arrow
next arrownext arrow

ಡಾ। ಅಂಶುಮಂತ್ ಗೌಡರವರ ಪರಿಚಯ

ಡಾ. ಅಂಶುಮಂತ್ ಗೌಡರವರು ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಕುಟುಂಬದಿಂದ ಬಂದವರು. ಒಳ್ಳೆಯ ಮಾನವೀಯ ಮೌಲ್ಯಗಳನ್ನು ರೂಪಿಸಿಕೊಂಡು ಬೆಳೆದಿದ್ದಾರೆ. ವೈದ್ಯರಾಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ. ಕೃಷಿಯಲ್ಲಿಯೂ ಆಸಕ್ತಿ ಹೊಂದಿದ್ದಾರೆ.

ಜನಸೇವೆಯಲ್ಲಿ ಅವರಿಗೆ ಅಪಾರ ಆಸಕ್ತಿ. ಪ್ರಗತಿಪರ ಚಿಂತನೆ ಯೊಂದಿಗೆ ಸಮಾಜಕ್ಕೆ ಸೇವೆ ಸಲ್ಲಿಸುವ ದೃಷ್ಟಿಕೋನ ಹೊಂದಿದ್ದಾರೆ. ರೋಟರಿ ಕ್ಲಬ್ ಮತ್ತು ಇನ್ನಿತರ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಜನರ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಜನರ ಜೀವನವನ್ನು ಕಟ್ಟಿಕೊಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾಗಿ ರಾಜಕೀಯ ಜೀವನ ಆರಂಭಿಸಿದ್ದಾರೆ. ಯುವ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಬಾರಿ ವಿಧಾನಸಭೆಯ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ.

ಸರಳತೆ, ಪ್ರಾಮಾಣಿಕತೆ, ಸಭ್ಯ ವರ್ತನೆ, ಸ್ವಾರ್ಥಹರಿತ ಕಾಯಕತೆ ಮತ್ತು ಮಾನವೀಯ ಮೌಲ್ಯಗಳನ್ನು ರೂಪಿಸಿಕೊಂಡಿದ್ದಾರೆ. ಜನರ ಜೀವನ ಮಟ್ಟದ ಸುಧಾರಣೆಯ ಗುರಿಯೊಂದಿಗೆ ಈ ಬಾರಿ ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಜನರ ಧ್ವನಿಯಾಗಿ ಪ್ರತಿನಿಧಿಸಬೇಕೆಂದು ಜನರ ಆಶಯ.

 

ಮಾಧ್ಯಮ ವರದಿಗಳು

ಗ್ಯಾಲರಿ

ನಮ್ಮ ಉಡುಪಿ-ಚಿಕ್ಕಮಗಳೂರು

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಕರ್ನಾಟಕದ ೨೮ ಲೋಕಸಭಾ (ಸಂಸತ್ತಿನ ಕೆಳಮನೆ) ಕ್ಷೇತ್ರಗಲ್ಲಿ ಒಂದು. 2002 ರಲ್ಲಿ ಡೆಲಿಮಿಟೇಷನ್ ಕಮಿಷನ್ ಆಫ್ ಇಂಡಿಯಾ ಶಿಫಾರಸಿನ ಆಧಾರವಾಗಿ, 2008 ರಲ್ಲಿ ಸಂಸಧೀಯ ಕ್ಷೇತ್ರದ ವಿಂಗಡಣೆಯ ಅನುಷ್ಠಾನದ ಭಾಗವಾಗಿ ಈ ಕ್ಷೇತ್ರವನ್ನು ರಚಿಸಲಾಯಿತು.

ಕ್ಷೇತ್ರ ವಿಭಾಗಗಳು

2014 ರ ಪ್ರಕಾರ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಎಂಟು ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿದೆ:

ನಾಲ್ಕು ವಿಧಾನಾಸಭಾ ಕ್ಷೇತ್ರಗಳು: ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಮತ್ತು ತರೀಕೆರೆ – ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.ಇನ್ನುಳಿದ ನಾಲ್ಕು : ಕುಂದಾಪುರ ,ಉಡುಪಿ, ಕಾಪು ಮತ್ತು ಕಾರ್ಕಳ – ಉಡುಪಿ ಜಿಲ್ಲೆಯಲ್ಲಿದೆ.

ಸಂಪರ್ಕಿಸಿ

ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ

ದೂರುಗಳು/ಸಲಹೆಗಳು

ಹೆಚ್ಚಿನ ಮಾಹಿತಿಗಾಗಿ ವಾಟ್ಸಪ್ ಚಾನೆಲ್ ಸೇರಿ

ಚಾನೆಲ್ ಸೇರಲು ಚಿತ್ರದ ಮೇಲೆ ಕ್ಲಿಕ್ ಮಾಡಿ
Scroll to Top